Saturday, 6 August 2016

ವಿರಹಿ...!



ಕಾಡುವ ಪದಗಳ ಲೋಕಕೆ
ನೀನೇ ಮಾಲಿಕನು..
ತೇಲುವ ತೆರೆಗಳ ಕಡಲಿಗೆ
ನೀನೇ ಯಾತ್ರಿಕನು..
ಏನೇ ಹಾಡಿದರೂ ನಾನೇನೇ ಗೀಚಿದರೂ
ನಿನ್ನ ನೆನಪೇ ನನ್ನನ್ನು ಸಂಮೋಹಿಸುತಿದೆ



ಸಾಕಾಯ್ತು ನಂಗಂತೂ ಮಾತುಕತೆ
ಆಲಿಸುವೆ ನಿನ್ನ ಕವಿತೆ..
ಜೋರಾಯ್ತು ನನ್ನಲ್ಲಿ ಮೂಕವ್ಯಥೆ
ಊಹಿಸಲು ನಿನ್ನ ಕುರಿತೇ..
ಮುಗಿಯದ ಭಾವದ ಬಳುವಳಿಗೆ
ಮರುಗಿದೆ ನನ್ನ ಮನ



ನೀ ಆಡಿದ ಎಲ್ಲಾ ಮಾತಿಗೂ ಕೂಡ
ನನ್ನ ಭಾವವೂ ನಿಗೂಢ..
ನೀ ಕಾಡಿದ ಎಲ್ಲಾ ಕನಸಲೂ ಕೂಡ
ನನ್ನ ಕಲ್ಪನೆ ಅಗಾಧ..
ಚುರುಕಿನ ಪ್ರೀತಿಯ ಚಳುವಳಿಗೆ
ಕರಗಿದೆ ನನ್ನ ಮನ

11 comments:

  1. ಬಾವದ ಬಾಗಿಲ ತರೆದಿಟ್ಟ ಭಾವನಾರು!! :)

    ReplyDelete
    Replies
    1. ನಾನೂ ಹುಡುಕುತ್ತಾ ಇದೀನಿ ಇನ್ನೂ ....!!!

      Delete
    2. This comment has been removed by the author.

      Delete
  2. ಭಾವದ ಬಾಗಿಲು ಅನುಭಾವದ ಬಾಗಿಲಾಗಿ ಮಂದಾರದಿಂದ ಸುಂದರವಾಗಿದೆ

    ReplyDelete
  3. This comment has been removed by the author.

    ReplyDelete
  4. ಧನ್ಯೊಸ್ಮಿ..!!

    ReplyDelete