ಈ ಜೀವ ಬರಿಯಾಗಿದೆ ನೀನಿಲ್ಲದೆ
ಆ ಬಾಲ್ಯ ಬೇಕೆನಿಸಿದೆ..
ನಮ್ಮ ಬಾಲ್ಯದ ನೆನಪಾಗಿದೆ
ಅದ ನಿನಗೆ ಹೇಳಬೇಕಿದೆ
ನೀನಿನ್ನು ಬರಲಾರೆಯಾ.....
ನೀ ಆಡಿದ ಜೋಕಾಲಿಯು
ನಿನ್ನ ಕಾಣಲು ಅಲೆಯುತಿದೆ..
ನೀ ನೀಡಿದ ಹಕ್ಕಿಪುಕ್ಕವು
ನನ್ನ ಜೇಬಲಿ ಹಾಯಾಗಿದೆ
ಆ ನೆನಪೆಲ್ಲವೂ ನನ ಕಾಡಿವೆ
ಈ ಏಕಾಂಗಿಗೆ ಜೊತೆಯಾಗಿವೆ
ನಿನ್ನ ನೆನಪ ಅತಿ ಮಾಡಿವೆ....
ಪುಟ್ಟ ಹಳ್ಳದ ಆ ತೂಗು ಸೇತುವೆ
ನಮ್ಮ ಜಗಳದ ಮಜ ಹೇಳಿದೆ
ಊರ ಆಚೆಯ ಆ ದೇಗುಲ
ನಮ್ಮ ರಾಜಿಗೆ ರುಜು ಹಾಕಿದೆ
ಆ ನೆನಪೆಲ್ಲವೂ ಮರುಕಳಿಸಿದೆ
ಈ ಒಂಟಿಗೆ ಜಂಟಿಯಾಗಿವೆ
ನಿನ್ನ ಕನಸು ತಲೆ ಕೆಡಿಸಿದೆ....
ಆ ಬಾಲ್ಯ ಬೇಕೆನಿಸಿದೆ..
ನಮ್ಮ ಬಾಲ್ಯದ ನೆನಪಾಗಿದೆ
ಅದ ನಿನಗೆ ಹೇಳಬೇಕಿದೆ
ನೀನಿನ್ನು ಬರಲಾರೆಯಾ.....
ನೀ ಆಡಿದ ಜೋಕಾಲಿಯು
ನಿನ್ನ ಕಾಣಲು ಅಲೆಯುತಿದೆ..
ನೀ ನೀಡಿದ ಹಕ್ಕಿಪುಕ್ಕವು
ನನ್ನ ಜೇಬಲಿ ಹಾಯಾಗಿದೆ
ಆ ನೆನಪೆಲ್ಲವೂ ನನ ಕಾಡಿವೆ
ಈ ಏಕಾಂಗಿಗೆ ಜೊತೆಯಾಗಿವೆ
ನಿನ್ನ ನೆನಪ ಅತಿ ಮಾಡಿವೆ....
ಪುಟ್ಟ ಹಳ್ಳದ ಆ ತೂಗು ಸೇತುವೆ
ನಮ್ಮ ಜಗಳದ ಮಜ ಹೇಳಿದೆ
ಊರ ಆಚೆಯ ಆ ದೇಗುಲ
ನಮ್ಮ ರಾಜಿಗೆ ರುಜು ಹಾಕಿದೆ
ಆ ನೆನಪೆಲ್ಲವೂ ಮರುಕಳಿಸಿದೆ
ಈ ಒಂಟಿಗೆ ಜಂಟಿಯಾಗಿವೆ
ನಿನ್ನ ಕನಸು ತಲೆ ಕೆಡಿಸಿದೆ....

No comments:
Post a Comment